ಯಾವಾಗ ಮೂಡುವುದು ಮಂದಹಾಸದ ಹೂ ನಗೆ
ಯಾವಾಗ ಕಾಣುವೆನು ಆನಂದದ ಆ ಬಗೆ
ಕ್ಷಣ ಕ್ಷಣ ಕಾಡುವ ಬಾಳಿನ ಪ್ರತಿ ಹೆಜ್ಜೆಗಳು
ಅಂಗೈ ಮುಷ್ಟಿಯಲಿ ಕಟ್ಟಿಟ್ಟ ಮನಸಿನ ಭಾವನೆಗಳು
ಯಾವಾಗ ನುಡಿವವು ಸಪ್ತಸ್ವರದ ಗೆಜ್ಜೆಗಳು
ನೊಂದು ಕಾಯುತ ಕುಳಿತಿದೆ ಜೀವವು
ಉಸಿರುಗಟ್ಟಿ ಸಾಯುತಿರುವ ಭಾವವು
ಯಾವಾಗ ಹಾಡುವದು ಬಾಳಿನ ಅರುಣರಾಗವು
ಶಿವಪ್ರಸಾದ ಮಿಣಜಿಗಿ
ಯಾವಾಗ ಕಾಣುವೆನು ಆನಂದದ ಆ ಬಗೆ
ಕ್ಷಣ ಕ್ಷಣ ಕಾಡುವ ಬಾಳಿನ ಪ್ರತಿ ಹೆಜ್ಜೆಗಳು
ಅಂಗೈ ಮುಷ್ಟಿಯಲಿ ಕಟ್ಟಿಟ್ಟ ಮನಸಿನ ಭಾವನೆಗಳು
ಯಾವಾಗ ನುಡಿವವು ಸಪ್ತಸ್ವರದ ಗೆಜ್ಜೆಗಳು
ನೊಂದು ಕಾಯುತ ಕುಳಿತಿದೆ ಜೀವವು
ಉಸಿರುಗಟ್ಟಿ ಸಾಯುತಿರುವ ಭಾವವು
ಯಾವಾಗ ಹಾಡುವದು ಬಾಳಿನ ಅರುಣರಾಗವು
ಶಿವಪ್ರಸಾದ ಮಿಣಜಿಗಿ