Thank you message


Saturday, 20 June 2015

ನಿನ್ನ ಮೌನವೇ ಸುಂದರವಾದ ಮಾತು...

ನಿನ್ನ ಮೌನವೇ ಸುಂದರವಾದ ಮಾತು 
ನಿನ್ನ ಮುಗುಳ್ನಗೆಯೇ ನನ್ನ ಜೀವನಕೆ ಸದಾ ಸಾಥು 

ನೀ ಮಾತನಾಡಿದರೆ ಅದುವೇ ಹೂವಿನ ಸಂತೆ 
ಆ ನಿನ್ನ ಲಾವಣ್ಯವು ಸುರಿಯುವ ಜೇನಿನ ಮಳೆಯಂತೆ 
ಪ್ರತಿ  ಹಗಲು ಇರುಳು ನನಗೆ ನಿನ್ನದೇ ಚಿಂತೆ

ಮಧುರ ಮಾತುಗಳ ಸ್ವಪ್ನಗಳ ತುದಿಯಲಿ 
ಗಾನಸುಧೆ ಹರಿಸುವ ಸೌಂದರ್ಯದ ಹೊಳೆಯಲಿ 
ನನಗಾದ ಆ ಹೃದಯ ಸ್ಪಂದನ ನಾ ಹೇಗೆ ಮರೆಯಲಿ 

                                          ಶಿವಪ್ರಸಾದ ಮಿಣಜಿಗಿ