Thank you message


Saturday, 6 June 2015

ಸಾವಿರ ಸುಳ್ಳನು ಹೇಳಿವೆ ಕಣ್ಣುಗಳು ನಿನ್ನನು ನೋಡಲು...

ಸಾವಿರ ಸುಳ್ಳನು ಹೇಳಿವೆ ಕಣ್ಣುಗಳು ನಿನ್ನನು ನೋಡಲು 
ಏನೆಲ್ಲ ಮಾಡಿದೆ ಇ ಮನಸು ಚಿತ್ತವು ನಿನ್ನ ಬಿಟ್ಟು ಕದಡದೆ ಇರಲು 

ಮಾನಸ ಸರೋವರದ ಅಲೆಗಳು ಅಪ್ಪಿದ ಹಾಗೆ 
ಪ್ರೆಮಲೋಕದ ಪಾರಿಜಾತವು ಕಿವಿಯಲಿ ಪಿಸುಗುಟ್ಟ ಹಾಗೆ 
ನನ್ನ ಕಣ್ಣುಗಳು ಬಿಡದೇ ನೋಡಿವೆ ನಿನ್ನನು ಸುಮ್ಮನೆ ಹಾಗೆ

ಪರಿಚಯವಿಲ್ಲದ ಪ್ರೆಮದೂರಿಗೆ ಬಂದೆ ನಾನು 

ತಿಳಿಯದಾದೆ ನಿನ್ನಯ ವಿಳಾಸವ ಅದರಲಿ ನಾನು 
ಬೇಗ ಬಂದು ಕರೆದೊಯ್ಯಬಾರದೆ  ನನ್ನನು ಆ ಪ್ರೇಮದ ಮನೆಗೆ ನೀನು

                                                               ಶಿವಪ್ರಸಾದ ಮಿಣಜಿಗಿ