Thank you message


Saturday, 9 May 2015

ಒಂದು ದಿನವಾದರೂ ಸಿಗಲಿ ನನಗೆ ನಿನ್ನ ಪ್ರೀತಿಯ ಸಂಭಂದ

ಒಂದು ದಿನವಾದರೂ ಸಿಗಲಿ ನನಗೆ ನಿನ್ನ ಪ್ರೀತಿಯ ಸಂಭಂದ 
ಜೀವನದುದ್ದಕ್ಕೂ ನೆನೆಯುತಿರುವೆ ಆ ದಿನದ ಅನುಬಂಭವ 

ಕಪ್ಪೆಚಿಪ್ಪು ಸ್ವಾತಿಮುತ್ತಿನ ಜೊತೆಯೇ ನಮ್ಮ ಸಂಭಂದ 
ತೀರ ಸಾಗರವನು ಅಲೆಗಳು ಅಪ್ಪುವ ಹಾಗೆ ನಮ್ಮ ಅನುಭಂದ 
ಪ್ರೀತಿಯ ಲೋಕದಲಿ ಮುಳುಗುವುದೇ ಒಂದು ಮಹಾನಂದ 

ಹುಣ್ಣಿಮೆ ರಾತ್ರಿ ತಣ್ಣನೆಯ ಗಾಳಿ ನಮ್ಮಯ ಇ ಸಂಭಂದ 
ಚಂದ್ರನ ಬಿಂಬ ನೀರಲಿ ತೇಲುವ ಅಪರೂಪದ ಅನುಭಂದ 
ಚಂದ್ರನ ಬೆಳಕಲಿ ನಿನ್ನಯ ನೋಡುಹುದೇ ನನಗೆ ಮಹಾನಂದ

                                                    ಶಿವಪ್ರಸಾದ ಮಿಣಜಿಗಿ