Thank you message


Saturday, 16 May 2015

ಗೆಳತಿ...

ಓ ಕಾವೇರಿಯೇ ಎಲ್ಲಿ ನೀ ಓಡುವೆ 
ನಿಲ್ಲು ನಿಲ್ಲು ಇಲ್ಲಿಯೇ ಇಲ್ಲೆ ಇರುವಳು ನನ್ನ ಗೆಳತಿ 
ನಿನ್ನೊಂದಿಗೆ ಅವಳಿಗೆ ಆಡುವ ಆಸೆ 
ಪರಿಚಯಸುವೆ ಬಾ ನನ್ನ ಇ ಪ್ರೀಯ ಗೆಳತಿಯ 

ದುಮ್ಮಿಕ್ಕಿ ಬೀಳುವಾಗ ತಾಗದಿರು ಅವಳ ಕೆನ್ನೆಯ 
ನಾಚದಿರು ಅವಳ ಮೊಗವ ನೋಡಿ, ಮರುಗದಿರು ಅವಳ ಸೌಂದರ್ಯವ ನೋಡಿ 
ಆದರೆ ಧುಮುಕುವದಾ ಮರೆಯದಿರು ಅವಳ ಲಾವಣ್ಯವ ನೋಡಿ 

ಗಂಗೆಗೂ ಕೇಳಿದೆ ತುಂಗೆಗೂ ಕೇಳಿದೆ ನಾನೂ ಯೋಚಿಸಿದೆ 
ಇವಳು ನಡೆದರೆ ಮೆನಕೆಯೋ ಹಾಡಿದರೆ ಕೋಗಿಲೆಯೋ 
ಹೋಲಿಕೆಗೆ ಪದಗಳೇ ಸಿಗದೆ ನಾನೇ ಮೂಕನಾದೆ ಕಾವೇರಿ, ಇವಳ ಅಂದವ ನೋಡಿ 

                                                                                  ಶಿವಪ್ರಸಾದ ಮಿಣಜಿಗಿ