Thank you message


Saturday, 25 April 2015

ಆ ನಿನ್ನ ಹವಳದ ತುಟಿಯಲಿ ನುಡಿ ಓಮ್ಮೆ ನನ್ನ ಹೆಸರನು...

ಆ ನಿನ್ನ ಹವಳದ ತುಟಿಯಲಿ ನುಡಿ ಓಮ್ಮೆ ನನ್ನ ಹೆಸರನು 
ನಿನ್ನಯ ಜೀವಕೆ ಓಮ್ಮೆಯಾದರು ಬಳಸಿಕೊ ನನ್ನಯ ಉಸಿರನು 

ಮಳೆಯ ಹನಿಗಳು ನಿನ್ನಯ ತುಟಿಯ ಮೇಲೆ ಸರಿದಾಡಿದ ಹಾಗೆ 
ಪ್ರತಿದ್ವನಿಸುವ ಗುಮ್ಮಟದಿ ನೀ ನನ್ನ ಕೊಗಿದ ಹಾಗೆ 
ಮೂಡಲಿ ನನ್ನಲಿ ಇ ತರಹದ ಭಾವನೆಗಳು ಸದಾ ಹೀಗೆ 

ಕೋಗಿಲೆಯು ವಸಂತವ ನೆನಪಿಸಿ ಕೊರಗಿದ ಹಾಗೆ 
ಮುಂಗಾರು ಮಳೆ ಮಳೆಬಿಲ್ಲನು ನೆನಪಿಸಿದ ಹಾಗೆ 
ನಿನ್ನ ನೆನಪು ಕಾಡುತಿರಲಿ ಜೀವನದುದ್ದಕ್ಕೂ ಸದಾ ಹೀಗೆ 

                                            ಶಿವಪ್ರಸಾದ  ಮಿಣಜಿಗಿ