Thank you message


Saturday, 18 April 2015

ಸಂತಸ ದುಃಖಗಳ ನಡುವೆ ಮಿಂದು ಹೋದೆನು...

ಸಂತಸ ದುಃಖಗಳ ನಡುವೆ ಮಿಂದು ಹೋದೆನು 
ಭಾವನೆಗಳ ಅಲೆಗಳ ರಭಸಕೆ ಕೊಚ್ಚಿಹೋದೆನು

ಸವಿಸವಿ ನೆನಪುಗಳ ಮೆಲುಕು ಹಾಕಿದ ಸುದಿನ 
ದಿನವಿಡಿ ಜೊತೆಗಿರುವ ಸಂಬಂಧಗಳ ಕಳಚಿ ಹೊರಟ ಇ ದಿನ 
ಎಲ್ಲ ನೆನಪುಗಳ ಬುತ್ತಿಕಟ್ಟಿಕೊಂಡು ಹೊರಟ ಆ ಕ್ಷಣ 

ಹಳೆಯ ನಂಟು ಕಳಚಿದ ನೋವಿದೆ 
ಹೊಸ ಬಾಂಧವ್ಯ ಅಪ್ಪುವ ಖುಷಿ ಇದೆ 
ಇ ಕ್ಷಣದ ಭಾವನೆ ವ್ಯಕ್ತಪಡಿಸಲು ಪದಗಳೇ ಇಲ್ಲವಾಗಿವೆ 

                                            ಶಿವಪ್ರಸಾದ ಮಿಣಜಿಗಿ