Thank you message


Saturday, 11 April 2015

ನೀನೊಂದು ಹೊಳೆಯುವ ಚುಕ್ಕಿ ಸಮೂಹದ ಹಿಂಡು...

ನೀನೊಂದು ಹೊಳೆಯುವ ಚುಕ್ಕಿ ಸಮೂಹದ ಹಿಂಡು 
ಬೆನ್ನಹತ್ತಿವೆ ನಿನ್ನನು ಸೇರಲು ದುಂಬಿಗಳು ದಂಡು 

ನನ್ನ ಮನದ ಪ್ರೀತಿಯ ವೇದನೆಯ ನೀ ಕಂಡು 
ಕನಸಲಿ ಕೈಬೀಸಿ ಕರೆದೆ ನನ್ನನು ಅಂದು 
ಆ ನೆನಪಲಿ ತೆಲಿಹೋಗಿದೆ ಮನವು ಬಾನಲಿ ಇಂದು 

ಕಾಯುತಿದೆ ಇ ಜೀವ ನಿನ್ನ ಬರುವಿಕೆಗೆ ಇಂದು 
ಅದೃಷ್ಟದ ಬಾಗಿಲ ತೆರೆದು ಬಾಳನು ಬೆಳಗು ನಿ ಬಂದು 
ಆನಂದಬಾಷ್ಪ ಉಕ್ಕಿಬಂದಿದೆ ನಿನ್ನ ಬರುವಿಕೆಯ ಕಂಡು

                                          ಶಿವಪ್ರಸಾದ ಮಿಣಜಿಗಿ