Thank you message


Saturday, 28 March 2015

ಜೀವನದ ಹಾದಿಯಲಿ ತೊಡಕುಗಳು ಎಷ್ಟೋ ...

ಜೀವನದ ಹಾದಿಯಲಿ ತೊಡಕುಗಳು ಎಷ್ಟೋ 
ಸಾವಿನ ಬಲೆಯಿಂದ ಕಾಯುವ ಜೀವದಾನಗಳು ಎಷ್ಟೋ
ಒಳ್ಳೆಯದು ಕೆಟ್ಟದ್ದು ಗೊತ್ತಿರದ ಭೂಮಿಯಲಿ ಉತ್ತರ ಇಲ್ಲದ ಪ್ರಶ್ನೆಗಳು ಎಷ್ಟೋ

ಯಾವುದು ಸತ್ಯ ಯಾವುದು ಸುಳ್ಳು ತಿಳಿಸದೆ ಹೋಗುವ ಜೀವನ ಪಾಠ 
ಸತ್ಯಶೋಧದ ಕನಸಿನಲ್ಲಿಯೇ ಮುಗಿದು ಹೋಗಿದೆ ಬಾಳಿನ ಆಟ 
ಕರುಣೆ ಇಲ್ಲದ ಕಟುಕ ಪ್ರಪಂಚವು ನೋಡುವದೆಲ್ಲ ಕಾಮಾಲೆ ನೋಟ 
ಕರುಣೆ ಮಮತೆಯ ಅರಿಯಲು ಬೇಕು ದೇವರ ಒಂದು ಚಾಟಿಯ ಏಟ 

ಸರಿ ತಪ್ಪಿನ ಲೆಕ್ಕವನಿಟ್ಟು ನೋಡುತಿರುವನು ಮೇಲಿನ ಒಡೆಯ 
ಅವನಿಲ್ಲದೆ ಬದಲಿಸಲಾಗದು ಪ್ರತಿ ಹೆಜ್ಜೆಯ ಬಾಳಿನ ನೆಡೆಯ 
ಮೊದಲು ನಮ್ಮಿಂದ ಶುರುವಾಗಲಿ ಮಾತನಾಡಲು ಒಳ್ಳೆಯ ನುಡಿಯ 
ಬೇರೆಯವರ ನೋಡಿ ಏಕೆ ದೂಡುವೆ ಮೊದಲು ತಿದ್ದಿಕೋ ನಿನ್ನಯ ಹಾದಿಯ 

                                                                     ಶಿವಪ್ರಸಾದ ಮಿಣಜಿಗಿ