Thank you message


Saturday, 14 March 2015

ನಿದ್ದೆ ಕಣ್ಣಲಿ ಎದ್ದು ಕುಂತಿದೆ ನನ್ನಿ ಮನವು ಯಾಕಿಂದು...

ನಿದ್ದೆ ಕಣ್ಣಲಿ ಎದ್ದು ಕುಂತಿದೆ ನನ್ನಿ ಮನವು ಯಾಕಿಂದು 
ಹಾಗೆ ಗೀಚಿವೆ ನನ್ನಿ ಕೈಗಳು ನಿನ್ನಯ ನೆನಪಲಿ ಕವನವ ಓಂದು 

ಭಾವಗಳಿಲ್ಲದೆ ಬರೆಯಲಾರೆ ಓಂದೇ ಒಂದು ಸಾಲು 
ನನ್ನ ಕವನದ ಏಲ್ಲಾ ಪದಗಳಿಗೆ ನಿನ್ನದೇ ಪಾಲು
ನಿನ್ನ ನೆನಪಿಲ್ಲದೆ ಮುಗಿಸಲಾರೆ ಕವನದ ಕೊನೆಯ ಸಾಲು 

ಹೋಲಿಕೆಗೆ ಸಿಗದ ಮುಂಜಾವಿನ ಸ್ವಪ್ನವೆ 
ಕಲ್ಪನೆಗೆ ಕಾಣದ ಕೋಲ್ಮಿಂಚಿನ ಸೆಳೆತವೆ 
ಕ್ಷಣ ಕ್ಷಣಕೂ ಕಾಡುವ ನಿನ್ನ ನೆನಪಿನ ಕೊರೆತವೆ 

                                ಶಿವಪ್ರಸಾದ ಮಿಣಜಿಗಿ