Thank you message


Saturday, 28 February 2015

ಚಲಿಸುವ ಮೋಡವು ನಿನ್ನ ನೆನಪ ತಂದಿದೆ...

ಚಲಿಸುವ ಮೋಡವು ನಿನ್ನ ನೆನಪ ತಂದಿದೆ 
ಅಲೆಯಲಿ ತೇಲುತ ನಿನ್ನ ಬಿಂಬ ಕಣ್ಮುಂದೆ ಬಂದಿದೆ 
ಹೃದಯ ಕಿವಿಯಲಿ ಪಿಸುಗುಡುತ ಏನಾಯಿತು ಎಂದಿದೆ

ಕಾಮನಬಿಲ್ಲಿನ ಬಣ್ಣಗಳ ನಡುವೆ ನಿನ್ನ ಮುಖ ಕಂಡಿದೆ 
ಕನಸಲು ನಿನ್ನನೇ ನೆನೆಯುತ ವೇದನೆಯ ಜೀವ ಹಿಂಡಿದೆ 
ನಿನ್ನ ದನಿಯು ಹುಣ್ಣಿಮೆಯ ಬೆಳಕಲಿ ಸುವ್ವಾಲಿಯ ಹಾಡಿದೆ 

ಕ್ಷಣ ಕ್ಷಣಕೂ ನಿನ್ನ ನೆನಪು ಇರುಳಲ್ಲೂ ಕಾಡಿದೆ 
ನಿನ್ನ ಸನಿಹ ಬಾಳಿನ ಪ್ರತಿ ಕ್ಷಣ ನಾ ಬೇಡಿದೆ
ನೀ ಜೊತೆಗಿರೆ ಮನವು ನಿನ್ನ ಮಾತಿನ ಸವಿಯ ಉಂಡಿದೆ 

                                             ಶಿವಪ್ರಸಾದ ಮಿಣಜಿಗಿ