ಸುಖ ದುಃಖಗಳ ಪಯಣವೇ ನಮ್ಮ ಜೀವನ
ಏರು ಪೇರುಗಳ ರಾಗದ ಬದುಕೇ ನಮ್ಮ ಗಾಯನ
ಬಾಳ ಹಾದಿಯಲಿ ತೊಡಕುಗಳೆಷ್ಟೊ ಖುಷಿಯ ಪಡೆಯಲು
ಸಾಂತ್ವನದ ಒಂದು ಮಾತು ಸಾಕು ಎಲ್ಲ ನೋವು ಮರೆಯಲು
ನೂರು ದಿನಗಳ ಬೇಕು ಎಲ್ಲರ ಪ್ರೀತಿ ಗಳಿಸಲು
ಒಂದೇ ನಿಮಿಷ ಸಾಕು ಗಳಿಸಿದ ಪ್ರೀತಿ ಅಳಿಸಲು
ದುಃಖದಲಿ ಮರುಗಬೇಡ ಒಳ್ಳೆಯ ಕಾಲ ಬರಲಿದೆ
ಚಿಂತೆ ಅಳಿಸಿ ಸಂತಸದ ನಗು ಮುಖದಲಿ ಅರಳಲಿದೆ
ಸಂತಸದ ಕ್ಷಣಗಳಲಿ ದುಃಖದ ದಿನಗಳ ನೆನೆಯುತಿರು
ಸಂತಸದ ದಿನವು ಕೂಡಾ ಕ್ಷಣಿಕವೆಂದು ಮರೆಯದಿರು
ಶಿವಪ್ರಸಾದ ಮಿಣಜಿಗಿ
ಏರು ಪೇರುಗಳ ರಾಗದ ಬದುಕೇ ನಮ್ಮ ಗಾಯನ
ಬಾಳ ಹಾದಿಯಲಿ ತೊಡಕುಗಳೆಷ್ಟೊ ಖುಷಿಯ ಪಡೆಯಲು
ಸಾಂತ್ವನದ ಒಂದು ಮಾತು ಸಾಕು ಎಲ್ಲ ನೋವು ಮರೆಯಲು
ನೂರು ದಿನಗಳ ಬೇಕು ಎಲ್ಲರ ಪ್ರೀತಿ ಗಳಿಸಲು
ಒಂದೇ ನಿಮಿಷ ಸಾಕು ಗಳಿಸಿದ ಪ್ರೀತಿ ಅಳಿಸಲು
ದುಃಖದಲಿ ಮರುಗಬೇಡ ಒಳ್ಳೆಯ ಕಾಲ ಬರಲಿದೆ
ಚಿಂತೆ ಅಳಿಸಿ ಸಂತಸದ ನಗು ಮುಖದಲಿ ಅರಳಲಿದೆ
ಸಂತಸದ ಕ್ಷಣಗಳಲಿ ದುಃಖದ ದಿನಗಳ ನೆನೆಯುತಿರು
ಸಂತಸದ ದಿನವು ಕೂಡಾ ಕ್ಷಣಿಕವೆಂದು ಮರೆಯದಿರು
ಶಿವಪ್ರಸಾದ ಮಿಣಜಿಗಿ