Thank you message


Saturday, 31 January 2015

ಏಲೆಯ ಮೇಲೆ ಇಬ್ಬನಿ ಹನಿಗಳ ಝೇಂಕಾರ...

ಏಲೆಯ ಮೇಲೆ ಇಬ್ಬನಿ ಹನಿಗಳ ಝೇಂಕಾರ 
ಮಲೆನಾಡಿನ ಬೆಟ್ಟಗಳಲಿ ಹಚ್ಚ ಹಸಿರಿನ ಓಂಕಾರ 
ಪ್ರಕೃತಿ ತಾನೇ ನಮ್ಮ ಬಾಳಲಿ ಆನಂದದ ಒಂದು ಪ್ರಾಕಾರ 

ದುಮ್ಮುಕ್ಕುವ ಜೋಗದ ಸಿರಿ ಕಾಣುವುದೇ ಆನಂದ 
ಹಚ್ಚ ಹಸಿರಿನ ಭೂತಾಯಿಯ ನೋಡುವುದೇ ಮಹದಾನಂದ 
ಹಸಿರ ಸಾಗರದಿ ಮುಳುಗಿ ಹೋಗಿ ಜೀವಕಾಗಿದೆ ಪರಮಾನಂದ 

ನೀಲಿ ಪದರಿನ ಆಕಾಶವೇ ನಮ್ಮ ಬದುಕಿನ ಅಂದರ 
ಕಡಲ ತೀರದಿ ರವಿಯು ಮುಳುಗವ ದೃಶ್ಯವೇಷ್ಟು ಸುಂದರ 
ನನ್ನ ಪಾಲಿಗೆ ಪ್ರಕೃತಿಯು ಓಡಹುಟ್ಟಿದ ಸೋದರ 

                                  ಶಿವಪ್ರಸಾದ ಮಿಣಜಿಗಿ