Thank you message


Saturday, 20 December 2014

ಅಳುವ ಮೀನಿನ ಕಣ್ಣೀರು ಯಾರಿಗೂ ಕಾಣದು...

ಅಳುವ ಮೀನಿನ ಕಣ್ಣೀರು ಯಾರಿಗೂ ಕಾಣದು
ನೊಂದ ಮನಸಿನ ದುಃಖ ಯಾರಿಗೂ ತೋಚದು  

ತಾಯಿಯ ಹೆರಿಗೆಯ ನೋವು ಮಗುವಿಗೆ ತಿಳಿಯದು 
ಮುಳ್ಳು ಚುಚ್ಚುವ ನೋವು ಗುಲಾಬಿಗೆ ಅರಿಯದು 
ನೊಂದ ಹಕ್ಕಿಯ ಹಾಡು ಯಾರಿಗೂ ಕೇಳದು 

ಪ್ರಾಣಿ ಜೀವದ ಕೂಗು ಕಟುಕನಿಗೆ ತಿಳಿಯದು 
ಕಣ್ಣಿರಿನ ಕಾರಣ ಕಣ್ಣರೆಪ್ಪೆಗೂ ಅರಿಯದು 
ಮನಸಿನ ಭಾವನೆ ಜೊತೆಗಿರುವ ದೇಹಕೂ ಗೊತ್ತಾಗದು 

                                            ಶಿವಪ್ರಸಾದ ಮಿಣಜಿಗಿ