ಅಮ್ಮ ಅಮ್ಮ ಇದು ಎಂತಾ ಪದವೆ ಅಮ್ಮ
ನೋವಿನ ಬಾಯಲಿ ಮೊದಲು ಬರುವ ಪದವೆ ಅಮ್ಮ
ಕಂದನ ನೋವಿಗೆ ಕಣ್ಣಿರಿಡುವ ಮೊದಲ ಜೀವವೆ ಅದುವೆ ಅಮ್ಮ
ನವಮಾಸ ಹೊತ್ತು ನೋವಲಿ ನರಳಿ ಜೀವವ ಕೊಡುವ ದೈವವೇ ಅಮ್ಮ
ಮಡಿಲಲಿ ಮಲಗಿಸಿ ಲಾಲಿಯ ಹಾಡಿ ನಮ್ಮನು ಸಲಹುವ ಓಲವಿನ ಅಮ್ಮ
ಗುಮ್ಮ ಎಂದು ಸುಮ್ಮನೆ ಹೆದರಲು ಮೊದಲ ಬರುವ ಪದವೆ ಅಮ್ಮ
ಕನಸಲಿ ಬೆಚ್ಚಿಬೀಳಲು ಮಗುವಿಗೆ ಮೊದಲು ಬರುವ ಪದವೆ ಅಮ್ಮ
ಜೀವನದ ಎಲ್ಲ ಏಳಿಗೆಗೆ ಹರಸಿ ಗೆಲುವನು ತರುವ ಗುರುವೇ ಅಮ್ಮ
ಸೋಲಿನ ಸಮಯದಿ ಧೈರ್ಯವ ತುಂಬಿ ಮುನ್ನೆಡಿಸುವ ಛಲವೇ ಅಮ್ಮ
ಬಾಳಿನ ಪಯಣದ ಎಲ್ಲಾ ಗೆಲುವಿಗೆ ಮುನ್ನುಡಿ ಬರೆಯುವೆ ಸ್ಪೂರ್ತಿಯೆ ಅಮ್ಮ
ದಣಿದ ಜೀವಕೆ ಸಾಂತ್ವನ ಹೇಳಿ ಕೈ ತುತ್ತು ಕೊಟ್ಟು ಬೆಳೆಸುವ ಅಮ್ಮ
ನಿಸ್ವಾರ್ಥ ಮನಸಿನ ಒಳ್ಳೆಯ ಹೃದಯದ ಕಣ್ಣಿಗೆ ಕಾಣುವ ದೇವರೆ ಅಮ್ಮ
ಶಿವಪ್ರಸಾದ ಮಿಣಜಿಗಿ