Thank you message


Saturday, 22 November 2014

ಹೆಣ್ಣಿನ ಶೀಲವು ಬೂದಿ ಮುಚ್ಚಿದ ಕೆಂಡ ನೋಡವ್ವ...

ಹೆಣ್ಣಿನ ಶೀಲವು ಬೂದಿ ಮುಚ್ಚಿದ ಕೆಂಡ ನೋಡವ್ವ
ಗಾಳಿ ಸೋಕಲು ತಂತಾನೆ ಹೊತ್ತಿ ಉರಿಯುಹುದು ನೋಡವ್ವ
ಗಾಳಿ ತಾಗದೆ ಇರಲವ್ವ, ಬೂದಿ ಸರಿಯದೆ ಉಳಿಲವ್ವ 

ಅಂದಕಾರದ ನಶೆಯ ಒಳಗೆ ಮನದ ಮೌನ ಮುರಿಯಬೇಡವ್ವ
ಮಂಕು ಬುದ್ದಿಯ ತವಕದಲ್ಲಿ ಸಮಯ ಪ್ರಜ್ಞೆಯ ಮರೆಯಬೇಡವ್ವ 
ಮಂಗನಂತ ಮನಸ ಕೈಗೆ ನಿನ್ನ ಜೀವ ನೀನೆ ಕೊಟ್ಟು ಮರುಗಬೇಡವ್ವ 

ಪ್ರಾಯ ಓಂದು ಅವನತಿಯ ಪ್ರಳಯ ನೋಡವ್ವ 
ಅದರ ಸೆಳೆತಕೆ ಮುಗ್ದ ಮನಸಿನ ಬಲೆಯ ಕೊಡಬೇಡವ್ವ
ಎಂತ ಪ್ರಳಯವೇ ಬಂದು ಅಪ್ಪಲಿ ಕುಗ್ಗಬೇಡವ್ವ ನೀನು ಬಗ್ಗಬೇಡವ್ವ

                                                           ಶಿವಪ್ರಸಾದ ಮಿಣಜಿಗಿ