Thank you message


Saturday, 8 November 2014

ಲಾಲಿಸಿದಳು ಯಶೋದೆ ಶ್ರೀಕೃಷ್ಣನ...

ಲಾಲಿಸಿದಳು ಯಶೋದೆ ಶ್ರೀಕೃಷ್ಣನ 
ಪಾಲಿಸಿದಳು ಯಶೋದೆ ಶ್ರೀಮುಕುಂದನ 

ಮೌನವ ತಾಳಲು ಜಗಳವ ಕಾಯುವ 
ಏತ್ತಿ ಆಡಿಸಲು ಹಾಗೆ ನಲಿಯುವ 
ಮಾತನಾಡಿಸಲು ಮುಗುಳ್ನಗೆ ಬೀರುವ 
ಏಲ್ಲರ ಸೆಳೆಯುವ ತುಂಟ ಕೇಶವ 

ಲಾಲಿಯ ಹಾಡಲು ಕಣ್ಣನು ಮುಚ್ಚುವ 
ನಿದ್ದೆಗೆ ಜಾರಿದ ಎಂದು ಎದ್ದರೆ 
ತಟ್ಟನೆ ಕಣ್ಣನು ತೆರೆದು ಅಮ್ಮನ ಹುಡುಕುವ 
ನವನೀತ ಚೋರ ಮುದ್ದಿನ ಮುರಾರಿ 

ಇರುಳಲಿ ಎಲ್ಲರ ನಿದ್ದೆಯ ಕೆಡಿಸುವ 
ನಿದ್ದೆ ಕಣ್ಣಲಿ ಹಾಲನು ಸವಿಯುವ 
ಯಶೋದೆ ಮಾತೆಗೆ ಬಿಡದೆ ಕಾಡುವ 
ಚಂದದ ಕುಮಾರ ಬಾಲ ಗೋಪಾಲ 

                  ಶಿವಪ್ರಸಾದ ಮಿಣಜಿಗಿ