Thank you message


Saturday, 29 November 2014

ಬಾರೆ ನನ್ನ ಒಲವೆ ತಾರೆ ನನ್ನ ಗೆಲುವೆ ...

ಬಾರೆ ನನ್ನ ಒಲವೆ ತಾರೆ ನನ್ನ ಗೆಲುವೆ 
ಬಾರೆ ನನ್ನ ಚೆಲುವೆ ತೋರೆ ನಿನ್ನ ನಗುವೆ

ಅಮ್ಮನ ಮಡಿಲಾಗಿ ಕರುವಿನ ದನಿಯಾಗಿ ನೀ ಬಾರೆ 

ಬಾಳಿನ ಬೆಳಕಾಗಿ ಮಗುವಿನ ನಗುವನು ನೀ ತಾರೆ 
ಓ ನನ್ನ ಮುಂಜಾನೆಯ ಮಂಜಿನ ಮಾನಸ ನೀರೆ 

ಹೂವಿನ ಅಂದವಾಗಿ ಮಲೆನಾಡಿನ ಚಂದವಾಗಿ ನೀ ಬಾರೆ 
ಬಾಳಿನ ಸಂಕಲ್ಪವಾಗಿ ದೇವರ ವರವನು ನೀ ತಾರೆ
ಕತ್ತಲಿನ ಪಯಣದಲಿ ಕಾಣದ ದಾರಿಯನು ನೀ ತೋರೆ  

                                         ಶಿವಪ್ರಸಾದ ಮಿಣಜಿಗಿ