Thank you message


Saturday, 1 November 2014

ಕನ್ನಡ ನಾಡು...

ನಾಡಿನೊಳಗ ನಾಡ ಚಂದ ನಮ್ಮ ಕನ್ನಡ ನಾಡು 
ಹೇಗೆ ಬಣ್ಣಿಸಲಿ ಇದರ ಮರ್ಮ ಉತ್ತುಂಗದ ಶಿಖರ ನೋಡು 

ಸಹ್ಯಾದ್ರಿ ಬೆಟ್ಟಗಳ ಶ್ರೇಣಿಯ ಮಲೆನಾಡು 
ದಾಸರ ಶರಣರ ಬರವಣಿಗೆಗಳ ಹಾಡು
ಇದುವೆ ನಮ್ಮ ಚೆಲುವ ಕನ್ನಡ ನಾಡು 

ಕೃಷ್ಣ ಕಾವೇರಿ ಹರಿಯುತಿಹರು ನೋಡು 
ಎಲ್ಲೆಲ್ಲೂ ಹಚ್ಚಹಸಿರಿನ ಪೈರುಗಳ ಬೀಡು 
ಇದುವೆ ನಮ್ಮ ಬೆಡಗಿನ ಕನ್ನಡ ನಾಡು

ಜಾತಿ ಮತ ಭಾಷೆಗಳ ಭಾವೈಕ್ಯತೆಯ ನೋಡು 
ಎಲ್ಲರೂ ನಮ್ಮವರೆನ್ನುವ ಸಹೃದಯದ ಹಾಡು 
ಇದುವೆ ನಮ್ಮ ಓಲವಿನ ಕನ್ನಡ ನಾಡು

                     ಶಿವಪ್ರಸಾದ ಮಿಣಜಿಗಿ