Thank you message


Saturday, 18 October 2014

ಹೃದಯದ ಮಿಡಿತವ ಏರುಪೆರು ಮಾಡುವ ಮಾಯಗಾರ...

ಹೃದಯದ ಮಿಡಿತವ ಏರುಪೇರು ಮಾಡುವ ಮಾಯಗಾರ
ಕಣ್ಣಿನ ನೋಟದಿ ಕವನವ ಹೇಳುವ ಕಲೆಗಾರ 
ನನ್ನಯ ಬಾಳಿನ ಮುನ್ನುಡಿ ಬರಯುವ ಬರಹಗಾರ

ನನ್ನ ಪ್ರೀತಿಯ ಗಾಳಿಪಟದ ಸೂತ್ರದಾರ 
ನನ್ನ ಜೀವನದ ಪ್ರತಿ ದೃಶ್ಯಗಳ ಪಾತ್ರದಾರ
ಪ್ರತಿ ಕ್ಷಣದ ಉಸಿರಾಟಕೆ ನೀನೆತಾನೆ ಆಮ್ಲಜನಕದ ಆಹಾರ 

ಬೇಗನೆ ಬಂದು ಸೇರು ನನ್ನನು ಓ ಸರದಾರ 
ನನ್ನ ನಗುವಿನ ಹೂ ಮಾಲೆ ಕಟ್ಟುವ ಹೂಗಾರ
ಪ್ರೀತಿಯ ನನ್ನ ಕನಸಿನ ಮನೆಗೆ ನೀನೆತಾನೆ ಆಧಾರ

                                       ಶಿವಪ್ರಸಾದ ಮಿಣಜಿಗಿ