Thank you message


Saturday, 4 October 2014

ಮೈಸೂರು ದಸರಾ ನೋಡೋಣ ಬಾರಣ್ಣ...

ಮೈಸೂರು ದಸರಾ ನೋಡೋಣ ಬಾರಣ್ಣ 
ತಾಯಿ ಚಾಮುಂಡಿ ಆಶಿರ್ವಾದ ಪಡೆಯೋಣ ಬಾರಣ್ಣ 
ಸಾಂಸ್ಕೃತಿಕ ನಗರ ಇದುವೇ ನೋಡಣ್ಣ 
ವಿಶ್ವವೇ ಸೆಳೆಯುವ ತಾಣವು ಇದಣ್ಣ 

ಆನೆ ಮೇಲೆ ಅಂಬಾರಿ ನೋಡುಹುದೆ ಒಂದು ಸಂಭ್ರಮ 
ಮೈಸೂರಿನ ಬಿದಿಗಳೆಲ್ಲ ತುಂಬಿವ ಸಡಗರ 
ಏಲ್ಲೆಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಗರ 
ಸಂತಸ ಸಡಗರ ಉಕ್ಕಿತೆಲುವ ಸಾಗರ 

ಮಹಿಷಾಸುರನ ಸಂಹರಿಸಿದ ಇ ದಿನ 
ದುಷ್ಟ ಶಕ್ತಿಗಳ ಅಡಗಿಸಿದ ಸುದಿನ 
ಬನ್ನಿ ಕೊಟ್ಟು ಬಂಗಾರದ ಹಾಗೆ ಇರೋಣ ಎನ್ನುವ ಇ ದಿನ 
ಭಂದುಬಳಗದ ಪ್ರೀತಿಸ್ನೇಹದ ಜೇನ ಸವಿಯುವ ನಮ್ಮ ಮನ 

                                                  ಶಿವಪ್ರಸಾದ ಮಿಣಜಿಗಿ