ನೀನೊಂದು ಜೇನಿನ ಹನಿಯು ನಾ ಹೇಗೆ ಸವಿಯಲಿ ನಿನ್ನ
ನೀನೊಂದು ಸುಂದರ ಕನಸು ನಾ ಹೇಗೆ ಮರೆಯಲಿ ನಿನ್ನ
ನೀನೊಂದು ಚಲಿಸುವ ಮೋಡ ನಾ ಹೇಗೆ ಹಿಡಿಯಲಿ ನಿನ್ನ
ಕರಗಿದೆ ಒಲವಿದು ನಿನ್ನಯ ಪ್ರೀತಿಗೆ
ನೀನೊಂದು ಕಾಡುವ ಕವನ ನಾ ಹೇಗೆ ಬರೆಯಲಿ ನಿನ್ನ
ನೀನೊಂದು ಶೃಂಗಾರ ಕಾವ್ಯ ನಾ ಹೇಗೆ ಹಾಡಲಿ ನಿನ್ನ
ನೀನೊಂದು ದೂರದ ಪಯಣ ನಾ ಹೇಗೆ ತಲುಪಲಿ ನಿನ್ನ
ಸೋತಿದೆ ಇ ಹೃದಯ ನಿನ್ನಯ ಮಾತಿಗೆ
ನೀನೊಂದು ಸುಂದರ ವದನ ನಾ ಹೇಗೆ ಚುಂಬಿಸಲಿ ನಿನ್ನ
ನೀನೊಂದು ಬಳುಕುವ ಲತೆಯು ನಾ ಹೇಗೆ ಬಳಸಲಿ ನಿನ್ನ
ನೀನೊಂದು ಬಿಡಿಸದ ಬಂಧ ನಾ ಹೇಗೆ ತೊರೆಯಲಿ ನಿನ್ನ
ಕರಗಿದೆ ಮರುಗಿದೆ ನಿನ್ನಯ ಮೋಡಿಗೆ
ಶಿವಪ್ರಸಾದ ಮಿಣಜಿಗಿ