ನಾವೆಷ್ಟು ಸಂತ್ರುಷ್ಟರೋ ಆರೋಗ್ಯದ ಭಾಗ್ಯ ನಮ್ಮದಾಗಿರಲು
ನಾವೆಷ್ಟು ಸೌಭಾಗ್ಯರೋ ಆರೋಗ್ಯದ ಭಾಗ್ಯ ನಮ್ಮ ಜೊತೆಗಿರಲು
ಪಿಸುಮಾತಿಗೆ ಕಿವಿಗಳಿರಲು, ತುಸುನೋಟಕೆ ಕಣ್ಣುಗಳಿರಲು
ತುಸುನೋವಿಗೆ ಸ್ಪರ್ಶವಿರಲು, ಹಿತಚಿಂತನೆಗೆ ಬುದ್ದಿ ಇರಲು
ನಾವೆಷ್ಟು ಧನ್ಯರೋ ನಾವೆಷ್ಟು ಭಾಗ್ಯರೋ
ರುಚಿಸವಿಯಲು ನಾಲಿಗೆ ಇರಲು, ಮೌನ ಮುರಿಯಲು ಮಾತುಗಳಿರಲು
ಪ್ರತಿಕ್ಷಣ ಮಿಡಿಯುವ ಹೃದಯವಿರಲು, ಪ್ರತಿಫಲ ಬಯಸದೆ ಮಿಡಿಯುತಿರಲು
ನಾವೆಷ್ಟು ಧನ್ಯರೋ ನಾವೆಷ್ಟು ಭಾಗ್ಯರೋ
ಉಳಿತಾಯ ಖಾತೆಯಲಿ ಹಣವಿಲ್ಲದಿದ್ದರು, ನಮ್ಮ ಜೀವನದ ಖಾತೆಯಲಿ ಆರೋಗ್ಯವಿರಲು
ದುಡ್ಡಿನ ದೊಡ್ಡಪ್ಪ ಇಲ್ಲದಿದ್ದರು, ಆರೋಗ್ಯದ ಚಿಕ್ಕಪ್ಪ ನಾವಾಗಿರಲು
ನಾವೆಷ್ಟು ಧನ್ಯರೋ ನಾವೆಷ್ಟು ಭಾಗ್ಯರೋ
ಶಿವಪ್ರಸಾದ ಮಿಣಜಿಗಿ