ಪ್ರೀತಿ ಲತೆಯೊಂದು ಕನಸಿನಲಿ ಬಂದು ನಿನ್ನ ಹೆಸರ ಹೇಳಿದೆ
ಎದೆಯಲ್ಲಿ ಮುಚ್ಚಿಟ್ಟ ನಮ್ಮ ಪ್ರೀತಿಯ ವಿಷಯ ಕೆಣಕಿ ಕೆಣಕಿ ಕೇಳಿದೆ
ಇ ವಿಷಯ ತಿಳಿದು ಇ ನನ್ನ ಮನಸು ಒಳಗೊಳಗೆ ಮುಗುಳ್ನಗೆಯ ಬಿರುತಿದೆ
ಜೀವನದ ಸಾಗರದ ಪ್ರೀತಿಯ ಸುಳಿಗೆ ನಾನಿಂದು ಸಿಲುಕಿದೆ
ನಿನ್ನಯ ಪ್ರೀತಿಯ ಉಸಿರಾಟವಿರಲು ಇ ಜೀವ ಇನ್ನೂ ಬದುಕುಳಿದಿದೆ
ನಸುಕಿನಾ ಕನಸಲ್ಲಿ ನಿದ್ದೆಯಾ ಕಣ್ಣಲ್ಲಿ ನೀ ನನಗೆ ಕಂಡಂತಿದೆ
ಆ ನಿನ್ನ ಒಲವು ಕನಸಲ್ಲೂ ಕೂಡ ಕೈಚಾಚಿ ಕರೆದಂತಿದೆ
ನಮ್ಮ ಪ್ರೀತಿಗೆ ನನ್ನ ಹೃದಯವಿಂದು ನೂರು ಪ್ರಶ್ನೆಗಳ ಕೇಳಿದೆ
ನಿನ್ನ ನೋಟವೆ ಆ ಕ್ಷಣ ನನ್ನ ಕಡೆ ತಿರುಗಿ ಎಲ್ಲ ಉತ್ತರ ಹೇಳಿದೆ
ಜೀವನದ ಪ್ರತಿಕ್ಷಣ ನಿನ್ನಯ ಸಿಹಿ ಸನಿಹ ಯಾವಾಗಲು ಬಯಸಿದೆ
ನೀನಿಲ್ಲದಿರೆ ಆ ಕ್ಷಣ ನನ್ನ ಮನವಿಂದು ಮರುಗಿಮರುಗಿ ಕೊರಗಿದೆ
ಶಿವಪ್ರಸಾದ ಮಿಣಜಿಗಿ