Thank you message


Saturday, 26 July 2014

ಚಂಚಲ ಇ ಮನಸು ಭ್ರಮಿಸುತಿದೆ ಕ್ಷಣಕ್ಷಣಕು...

ಚಂಚಲ ಇ ಮನಸು ಭ್ರಮಿಸುತಿದೆ ಕ್ಷಣಕ್ಷಣಕು 
ನೂರಾರು ಬಣ್ಣದ ಕನಸು ಎಲ್ಲವೂ ಹುಸಿ ನನಸು

ಕಾಮಕ್ರೋದದ ಮನಸು ಪ್ರೀತಿಸ್ನೇಹದ ಸೊಗಸು 

ಹಿಡಿತವಿಲ್ಲದ ಕನಸು ಬರಿ ಹುಸಿ ನನಸು 
ಸುಖದುಃಖದ ಮನಸು ನೋವುನಲಿವಿನ ಸೊಗಸು 
ನೂರಾರು ಮೋಹದ ಕನಸು ಬರಿ ಹುಸಿ ನನಸು 

ಹೂವ ಬೇಡುವ ಕನಸು ಮುಳ್ಳನರಿಯದ ಮನಸು 
ಮೋಹಬೇಡುವ ವಯಸು ಮೂಗತುದಿಯಲಿ ಮುನಿಸು 
ಓಳ್ಳೆ ತನವನು ಬಯಸು ಅದುವೆ ಮನಸಿಗೆ ತಿಳಿಸು 
ಕೆಟ್ಟ ತನವನು ದಹಿಸು ಪ್ರೀತಿ ಒಲುಮೆಯ ಗಳಿಸು 

                                   ಶಿವಪ್ರಸಾದ ಮಿಣಜಿಗಿ