ನದಿಯು ಸಾಗರವ ಸೇರುವ ಘಳಿಗೆ
ತೇಲಿಬಂದಿದೆ ನಿನ್ನ ಪ್ರೀತಿಯ ಅಲೆ ನನ್ನ ಬಳಿಗೆ
ಸಿಲುಕಿತು ನನ್ನ ಹೃದಯ ನಿನ್ನ ಪ್ರೀತಿಯ ಸುಳಿಗೆ
ಕರಗಿದೆ ಕಾರ್ಮೋಡ ಸುರಿದಿದೆ ಹೂಮಳೆ
ಕರಗಿದೆ ನನ್ನ ಮನ ಹರಿದಿದೆ ಜೇನಹೊಳೆ
ಸೂಸಲು ಅರುಣರಾಗ ನಿ ತೊಟ್ಟ ಬಳೆ
ತಟ್ಟನೆ ಮೂಡಿದೆ ನನ್ನ ಮುಖದಲಿ ನಗುವಿನ ಕಳೆ
ಆ ಕಾಡಿಗೆ ಕಣ್ಣುಗಳು ಸೆಳೆದಿವೆ ನನ್ನನು ಇಂದು
ಮಾಡಬಾರದೆ ರೆಪ್ಪೆಮಿಟುಕಿಸಿ ಕಣ್ಣಸನ್ನೆಯ ಬಳಿಬಂದು
ಕಷ್ಟಕೂ ಇಷ್ಟಕೂ ನೀನೆ ನನ್ನ ಬಾಳಿಗೆ
ನೂರು ಜನ್ಮ ಹುಟ್ಟಿಬಂದರೂ ನೀನೆ ನನ್ನ ಪಾಲಿಗೆ
ಶಿವಪ್ರಸಾದ ಮಿಣಜಿಗಿ
ತೇಲಿಬಂದಿದೆ ನಿನ್ನ ಪ್ರೀತಿಯ ಅಲೆ ನನ್ನ ಬಳಿಗೆ
ಸಿಲುಕಿತು ನನ್ನ ಹೃದಯ ನಿನ್ನ ಪ್ರೀತಿಯ ಸುಳಿಗೆ
ಕರಗಿದೆ ಕಾರ್ಮೋಡ ಸುರಿದಿದೆ ಹೂಮಳೆ
ಕರಗಿದೆ ನನ್ನ ಮನ ಹರಿದಿದೆ ಜೇನಹೊಳೆ
ಸೂಸಲು ಅರುಣರಾಗ ನಿ ತೊಟ್ಟ ಬಳೆ
ತಟ್ಟನೆ ಮೂಡಿದೆ ನನ್ನ ಮುಖದಲಿ ನಗುವಿನ ಕಳೆ
ಆ ಕಾಡಿಗೆ ಕಣ್ಣುಗಳು ಸೆಳೆದಿವೆ ನನ್ನನು ಇಂದು
ಮಾಡಬಾರದೆ ರೆಪ್ಪೆಮಿಟುಕಿಸಿ ಕಣ್ಣಸನ್ನೆಯ ಬಳಿಬಂದು
ಕಷ್ಟಕೂ ಇಷ್ಟಕೂ ನೀನೆ ನನ್ನ ಬಾಳಿಗೆ
ನೂರು ಜನ್ಮ ಹುಟ್ಟಿಬಂದರೂ ನೀನೆ ನನ್ನ ಪಾಲಿಗೆ
ಶಿವಪ್ರಸಾದ ಮಿಣಜಿಗಿ