Thank you message


Saturday, 5 July 2014

ಮುಳ್ಳಲ್ಲಿ ಮುಳ್ಳಾಗಿ, ಹೂವಲ್ಲಿ ಹೂವಾಗಿ ನೀನಿರೋ ಓ ಮನುಜ...

ಮುಳ್ಳಲ್ಲಿ ಮುಳ್ಳಾಗಿ, ಹೂವಲ್ಲಿ ಹೂವಾಗಿ ನೀನಿರೋ ಓ ಮನುಜ 
ಕಷ್ಟದಲಿ ನೋವಾಗಿ, ಇಷ್ಟದಲಿ ನಲಿವಾಗಿ ನೀನಿರೋ ಓ ತನುಜ

ದುಃಖದ ನೋವಿಗೆ ಕಣ್ಣಿರು ನೀನಾಗು
ದಣಿದ ಮನಸಿಗೆ ಸಾಂತ್ವನ ನೀನಾಗು 
ಕಾಮನಬಿಲ್ಲಿಗೆ ಬಣ್ಣವೇ ನೀನಾಗು 
ಓ ಮನುಜ, ಪ್ರತಿಫಲ ಬಯಸದ ನಿಸ್ವಾರ್ತ ಸೇವೆಗೆ ಮುಂದಾಗು 

ಯಾರನ್ನು ದೂರದಿರ ಮನಸು ನೀನಾಗು
ಏಲ್ಲರ ಒಳ್ಳೆಯ ಬಯಸುವ ಕನಸು ನೀನಾಗು
ಸಾವಿನ ಅಂಚಿನ ಜೀವಕೆ ಉಸಿರು ನೀನಾಗು
 ಓ ಮನುಜ, ವಿಷವನು ಅಮೃತವನು ಸಮನಾಗಿ ಸ್ವೀಕರಿಸುವ ಜೀವಿಯಾಗು 

                                                                      ಶಿವಪ್ರಸಾದ ಮಿಣಜಿಗಿ