ಸ್ವರ್ಗವೇ ಕೈ ಅಳತೆ ದೂರ ನಿನನ್ನ ಜೊತೆಗಿದ್ದರೆ
ನನ್ನೇ ನಾ ಮರೆವೆನು ನಿನನ್ನ ಸನಿಹವಿದ್ದರೆ
ಕಾಣದ ಕತ್ತಲಲಿ ಕೈಹಿಡಿಯುವ ದೀಪವೆ
ಬೆಳಗು ಬಾ ಒಮ್ಮೆ ನನ್ನ ಜೀವನ ಸ್ವಲ್ಪವೆ
ಹೋಲಿಕೆಗೆ ಸಿಗದ ಸೌಂದರ್ಯದ ಚೆಲುವೆ
ಹೃದಯ ವೀಣೆಯ ಮೀಟಿದೆ ನನ್ನ ಒಲವೆ
ಪ್ರಕೃತಿಯ ಸವಿಯ ಉಣಬಡಿಸಿದೆ ನಿನ್ನ ಸೊಬಗು
ಪ್ರೀತಿಯ ಹಸಿವ ಮಾಯಾವಗಿಸಿದೆ ನಿನ್ನ ಬೆಡಗು
ಮುಂಜಾನೆಯ ಕೊರೆವ ಚಳಿಗೆ ಮೂಡಿದೆ ನಡುಗು
ನೀ ಸನಿಹವಿಲ್ಲದ ಸಮಯ ಕಾಡಿದೆ ನಿನ್ನ ಕೊರಗು
ಶಿವಪ್ರಸಾದ ಮಿಣಜಿಗಿ
ನನ್ನೇ ನಾ ಮರೆವೆನು ನಿನನ್ನ ಸನಿಹವಿದ್ದರೆ
ಕಾಣದ ಕತ್ತಲಲಿ ಕೈಹಿಡಿಯುವ ದೀಪವೆ
ಬೆಳಗು ಬಾ ಒಮ್ಮೆ ನನ್ನ ಜೀವನ ಸ್ವಲ್ಪವೆ
ಹೋಲಿಕೆಗೆ ಸಿಗದ ಸೌಂದರ್ಯದ ಚೆಲುವೆ
ಹೃದಯ ವೀಣೆಯ ಮೀಟಿದೆ ನನ್ನ ಒಲವೆ
ಪ್ರಕೃತಿಯ ಸವಿಯ ಉಣಬಡಿಸಿದೆ ನಿನ್ನ ಸೊಬಗು
ಪ್ರೀತಿಯ ಹಸಿವ ಮಾಯಾವಗಿಸಿದೆ ನಿನ್ನ ಬೆಡಗು
ಮುಂಜಾನೆಯ ಕೊರೆವ ಚಳಿಗೆ ಮೂಡಿದೆ ನಡುಗು
ನೀ ಸನಿಹವಿಲ್ಲದ ಸಮಯ ಕಾಡಿದೆ ನಿನ್ನ ಕೊರಗು
ಶಿವಪ್ರಸಾದ ಮಿಣಜಿಗಿ