ನೀರಿನ ಅಲೆಯಾಗಿ ಮೂಡಿಬಾ ಓ ಮನಸೆ
ಬೆಳದಿಂಗಳ ರಾತ್ರಿಯಲಿ ತೇಲಿಬಾ ನನ್ನ ಕನಸೆ
ನೋಡುವ ಎಲ್ಲಾ ನೋಟದಿ ನಿನ್ನಯ ಬಿಂಬ
ತುಂಬಿಕೊಳ್ಳಲಿ ನಿನ್ನಯ ಚಿತ್ರ ನನ್ನಯ ಕಣ್ಣಿನ ತುಂಬ
ವಸಂತದ ಋತು ಬಯಸಿದೆ ನಿನ್ನನೆ
ನನ್ನಲಿ ಪ್ರೀತಿ ಮೂಡಿದೆ ಹಾಗೆ ಸುಮ್ಮನೆ
ನೀನೊಂದು ಮಲೆನಾಡಿನ ಶ್ರೀಗಂದ
ನನ್ನ ಬಾಳಲಿ ನೀ ಬಿಡಿಸಲಾಗದ ಸಂಬಂದ
ಚಂದಿರ ಕಣ್ಬಿಟ್ಟರೆ ದರೆಯಲ್ಲ ನೊರೆಹಾಲು
ನೀ ಬರುವಾ ಹಾದಿಗೆ ನಾನಾಗುವೆ ಹೂಗಳಸಾಲು
ಸುರಿಯುವೆ ಹೂಮಳೆ ನಿನ್ನಯ ಹೃದಯಕೆ
ನೆನೆದೊಡನೆ ಮರುಕ್ಷಣದಿ ಬರಿವೆಯಾ ಸನಿಹಕೆ
ಶಿವಪ್ರಸಾದ ಮಿಣಜಿಗಿ
ಬೆಳದಿಂಗಳ ರಾತ್ರಿಯಲಿ ತೇಲಿಬಾ ನನ್ನ ಕನಸೆ
ನೋಡುವ ಎಲ್ಲಾ ನೋಟದಿ ನಿನ್ನಯ ಬಿಂಬ
ತುಂಬಿಕೊಳ್ಳಲಿ ನಿನ್ನಯ ಚಿತ್ರ ನನ್ನಯ ಕಣ್ಣಿನ ತುಂಬ
ವಸಂತದ ಋತು ಬಯಸಿದೆ ನಿನ್ನನೆ
ನನ್ನಲಿ ಪ್ರೀತಿ ಮೂಡಿದೆ ಹಾಗೆ ಸುಮ್ಮನೆ
ನೀನೊಂದು ಮಲೆನಾಡಿನ ಶ್ರೀಗಂದ
ನನ್ನ ಬಾಳಲಿ ನೀ ಬಿಡಿಸಲಾಗದ ಸಂಬಂದ
ಚಂದಿರ ಕಣ್ಬಿಟ್ಟರೆ ದರೆಯಲ್ಲ ನೊರೆಹಾಲು
ನೀ ಬರುವಾ ಹಾದಿಗೆ ನಾನಾಗುವೆ ಹೂಗಳಸಾಲು
ಸುರಿಯುವೆ ಹೂಮಳೆ ನಿನ್ನಯ ಹೃದಯಕೆ
ನೆನೆದೊಡನೆ ಮರುಕ್ಷಣದಿ ಬರಿವೆಯಾ ಸನಿಹಕೆ
ಶಿವಪ್ರಸಾದ ಮಿಣಜಿಗಿ