Thank you message


Sunday, 1 June 2014

ಕನ್ನಡವೇ ಉಸಿರು, ಕನ್ನಡವೇ ಹಸಿರು ನಮ್ಮ ಬಾಳಿಗೆ...

ಕನ್ನಡವೇ ಉಸಿರು, ಕನ್ನಡವೇ ಹಸಿರು ನಮ್ಮ ಬಾಳಿಗೆ 
ಕರುನಾಡೇ ಬೆಳಕು, ಕರುನಾಡೇ ಬದುಕು ನಮ್ಮ ಪಾಲಿಗೆ

ಸಹ್ಯಾದ್ರಿಯ ಲೋಕವಿದು ಮಲೆನಾಡಿನ ನಾಕವಿದು 
ಶಿಲ್ಪಕಲೆಗಳ ಬೀಡಿದು ಋಷಿಮುನಿಗಳ ತವರೂರಿದು 
ನದಿಗಳ ನಾಡಿದು ಕಾವೇರಿಯ ಜನ್ಮಭೂಮಿಯಿದು 
ಸಾಗರಗಳ ತೀರವಿದು ಮೈಪುಳಕುವ ಸೊಬಗಿದು

ಸಾಹಿತ್ಯದ ಜೀವವಿದು ಪಂಪ ಕವಿಗಳ ನೆಲೆಯಿದು 
ಭಾರತರತ್ನಗಳ ನಾಡಿದು ಪ್ರಗತಿ ಪ್ರಶಸ್ತಿಗಳ ಸಾಲಿದು 
ಜ್ಞಾನ ವಿಜ್ಞಾನದ ಹೊಸ ಅನ್ವೇಷಣೆಯ ಸೆಲೆಯಿದು 
ವಿಶ್ವವೇ ಸೆಳೆಯುವ ಬೀಡಿದು ಚಲುವ ಕನ್ನಡ ನಾಡಿದು 

                                        ಶಿವಪ್ರಸಾದ ಮಿಣಜಿಗಿ