ಭಾವನೆಗಳ ಅಲೆಗಳು ಉಕ್ಕಿಬಂದ ಸಮಯ
ಮುಖದಿ ಮುಗಳ್ನಗೆ ತಂತಾನೆ ಮೂಡಿದ ಸಮಯ
ಸಾಗರದ ನಡುವಲ್ಲಿ ಖುಷಿಯ ಸುಳಿಗೆ ಸಿಕ್ಕ ಸಮಯ
ಅದುವೇ ನನ್ನ ಕಂದನ ಮೊದಲ ಬಾರಿ ನೋಡಿದ ಸಮಯ
ಕಪ್ಪೆಚಿಪ್ಪಿನಲಿ ಸ್ವಾತಿಮುತ್ತು ಹುಟ್ಟಿದ ಸಮಯ
ಅಮ್ಮನ ಮುಖ ತಟ್ಟನೆ ಕಣ್ಮುಂದೆ ಬಂದ ಸಮಯ
ಮಡದಿಯ ಸವಿನೆನಪು ಕಣ್ತುಂಬಿದ ಸಮಯ
ಅದುವೇ ನನ್ನ ಕಂದನ ಮೊದಲ ಬಾರಿ ನೋಡಿದ ಸಮಯ
ದೇವರು ನಮ್ಮನ್ನು ಹರಸಿದ ಸಮಯ
ಆನಂದಭಾಷ್ಪ ಅನುಭವಿಸಿದ ಸಮಯ
ಮುಗಿಲನು ಅಪ್ಪಿ ಚುಂಬಿಸಿದ ಸಮಯ
ಅದುವೇ ನನ್ನ ಕಂದನ ಮೊದಲ ಬಾರಿ ನೋಡಿದ ಸಮಯ
ಶಿವಪ್ರಸಾದ ಮಿಣಜಿಗಿ
ಮುಖದಿ ಮುಗಳ್ನಗೆ ತಂತಾನೆ ಮೂಡಿದ ಸಮಯ
ಸಾಗರದ ನಡುವಲ್ಲಿ ಖುಷಿಯ ಸುಳಿಗೆ ಸಿಕ್ಕ ಸಮಯ
ಅದುವೇ ನನ್ನ ಕಂದನ ಮೊದಲ ಬಾರಿ ನೋಡಿದ ಸಮಯ
ಕಪ್ಪೆಚಿಪ್ಪಿನಲಿ ಸ್ವಾತಿಮುತ್ತು ಹುಟ್ಟಿದ ಸಮಯ
ಅಮ್ಮನ ಮುಖ ತಟ್ಟನೆ ಕಣ್ಮುಂದೆ ಬಂದ ಸಮಯ
ಮಡದಿಯ ಸವಿನೆನಪು ಕಣ್ತುಂಬಿದ ಸಮಯ
ಅದುವೇ ನನ್ನ ಕಂದನ ಮೊದಲ ಬಾರಿ ನೋಡಿದ ಸಮಯ
ದೇವರು ನಮ್ಮನ್ನು ಹರಸಿದ ಸಮಯ
ಆನಂದಭಾಷ್ಪ ಅನುಭವಿಸಿದ ಸಮಯ
ಮುಗಿಲನು ಅಪ್ಪಿ ಚುಂಬಿಸಿದ ಸಮಯ
ಅದುವೇ ನನ್ನ ಕಂದನ ಮೊದಲ ಬಾರಿ ನೋಡಿದ ಸಮಯ
ಶಿವಪ್ರಸಾದ ಮಿಣಜಿಗಿ