ಸಾಗರದ ಅಲೆಯಾಗಿ, ಕೋಗಿಲೆಯ ದನಿಯಾಗಿ
ಮುಂಜಾವಿನ ಕನಸಿಗೆ ನೀ ಬಾರೆ
ತುಂತುರು ಮಳೆಹನಿಯ, ಮಂಜಿನ ಇಬ್ಬನಿಯ
ಮರುಭೂಮಿಯ ಈ ಮನಸಿಗೆ ನೀ ತಾರೆ
ಹೃದಯದ ಬಡಿತವೆ ನೀನು ಕನಸಿನ ಮಿಡಿತವೆ
ಓಲವಿನ ಚಿಲುಮೆಯೆ ನೀನು ಉಸಿರಿನ ತವಕವೆ
ಹಂಸದ ನಡಿಗೆಯೇ ನೀನು ಕಾಮನ ಬಣ್ಣವೆ
ಜೇನಿನ ಸವಿಯೆ ನೀನು ಹೂವಿನ ಮಕರಂದವೆ
ಸೂರ್ಯನ ಕಂತಿಯೇ ನೀನು ಇರುಳಿನ ಬೆಳದಿಂಗಳೆ
ಚಿಮ್ಮುವ ಚಿಲುಮೆಯೆ ನೀನು ಹೊಳೆಯುವ ಕಂಗಳೆ
ಅಚ್ಚರಿ ಸೋಜಿಗವೆ ನೀನು ಅದ್ಬುತದ ಬಿಂದುವೆ
ಮಣ್ಣಿನ ಸೌಗಂಧವೆ ನೀನು ನನ್ನ ಬಾಳಿನ ಬಂಧುವೆ
ಶಿವಪ್ರಸಾದ ಮಿಣಜಿಗಿ
ಮುಂಜಾವಿನ ಕನಸಿಗೆ ನೀ ಬಾರೆ
ತುಂತುರು ಮಳೆಹನಿಯ, ಮಂಜಿನ ಇಬ್ಬನಿಯ
ಮರುಭೂಮಿಯ ಈ ಮನಸಿಗೆ ನೀ ತಾರೆ
ಹೃದಯದ ಬಡಿತವೆ ನೀನು ಕನಸಿನ ಮಿಡಿತವೆ
ಓಲವಿನ ಚಿಲುಮೆಯೆ ನೀನು ಉಸಿರಿನ ತವಕವೆ
ಹಂಸದ ನಡಿಗೆಯೇ ನೀನು ಕಾಮನ ಬಣ್ಣವೆ
ಜೇನಿನ ಸವಿಯೆ ನೀನು ಹೂವಿನ ಮಕರಂದವೆ
ಸೂರ್ಯನ ಕಂತಿಯೇ ನೀನು ಇರುಳಿನ ಬೆಳದಿಂಗಳೆ
ಚಿಮ್ಮುವ ಚಿಲುಮೆಯೆ ನೀನು ಹೊಳೆಯುವ ಕಂಗಳೆ
ಅಚ್ಚರಿ ಸೋಜಿಗವೆ ನೀನು ಅದ್ಬುತದ ಬಿಂದುವೆ
ಮಣ್ಣಿನ ಸೌಗಂಧವೆ ನೀನು ನನ್ನ ಬಾಳಿನ ಬಂಧುವೆ
ಶಿವಪ್ರಸಾದ ಮಿಣಜಿಗಿ