Thank you message


Sunday, 4 May 2014

ಕಾಮನಬಿಲ್ಲಿಗೆ ಬಣ್ಣವೆ ಸಾಲದು...

ಕಾಮನಬಿಲ್ಲಿಗೆ ಬಣ್ಣವೆ ಸಾಲದು 
ದುಂಬಿಯ ಸಿಹಿಜೇನಿಗೆ ಮಕರಂದವೆ ಸಾಲದು 
ನಿನ್ನಯ ಬಣ್ಣಿಸಲು ಪದಗಳೆ ಸಾಲದು 
ಆದರೂ, ಬಣ್ಣಿಸದೆ ಸುಮ್ಮನೆ ಇರಲೂ ಆಗದು 

ಅಲೆಗಳ ಆ ರಭಸದಿ ಹೃದಯವ ಅಪ್ಪುವೆ 
ಮುಂಜಾವಿನ ಆ  ಕನಸಲಿ ಬಿಡದೆ ನೀ ಕಾಡುವೆ 
ಸುಡುವ ಇ ಬೇಗೆಯಲಿ ತಂಪನು ನೀಡುವೆ 
ಮನಸು ಹಗುರಾಗಿ ಹಾರುವಹಾಗೆ ಮಾಡುವೆ 


ದಿನದ ಆ ಪ್ರತಿಗಳಿಗೆಯಲು ನಿನ್ನದೆ ಯೋಚನೆ 

ಪ್ರೀತಿಯಲಿ ಮುಳುಗಿ ಕಳೆದೊಗುವ ಸೂಚನೆ 
ಜೀವವೆ ಕಳೆದೊಗುವ ನೋವಿನ ಯಾತನೆ 
ಮಳೆಯಾಗಿ ನೀ ಅಪ್ಪು ಬಾ ಮರೆಸಲು ನನ್ನ ವೇದನೆ 

                                          ಶಿವಪ್ರಸಾದ ಮಿಣಜಿಗಿ