Thank you message


Sunday, 27 April 2014

ಬೇಸರ ಓಡೀಸೊ ಪ್ರೀತಿಯ ಮೂಡಲಿ...

ಬೇಸರ ಓಡೀಸೊ ಪ್ರೀತಿಯ ಮೂಡಲಿ 
ಭಾವನೆ ಬದಲಿಸುವ ಸ್ಪೂರ್ತಿಯ ನೀಡಲಿ
ಸಂತೋಷದ ಅರುಣರಾಗವು ಜೀವನದಲಿ ಎಂದೆಂದು ಹಾಡಲಿ 

ಮೋಹದ ಈ ಮಾಹೆಯ ದಹಿಸುವ ಶಕ್ತಿಯ ನೀಡು 
ಜಗದೆಲ್ಲೇಡೆ ತುಂಬಿ ಹೋಗಿರುವ ದುಷ್ಟಶಕ್ತಿಗೆ ಅಂತ್ಯವ ಹಾಡು 
ಹೊಸಲೋಕದ ಹೊಸಜೀವದ ಹೊಸಬಾಳಿಗೆ ನಾಂದಿಯ ಹಾಡು 

ನಾನು ನನ್ನದೆಂಬ ಕೊಳೆಯು ತೊಳೆಯಲಿ 
ಸ್ಹೇಹಪ್ರೀತಿಯ ಒಂದೆ ರೀತಿಯ ಭಾವನೆ ಬೆಳೆಯಲಿ 
ಓಳ್ಳೆಯ ಸಮಯ ಬರುಹುದೆಂಬ ಆಶಯದ ಉಸಿರು ಏಂದೂ ಇರಲಿ 

                                                           ಶಿವಪ್ರಸಾದ ಮಿಣಜಿಗಿ