Thank you message


Saturday, 19 April 2014

ಮತದಾನ

ಮತದಾನ ಮತದಾನ ರಾಜಕಾರಣಿಗಳಿಗೆ ಮಾಡುವ ದಾನ 
ಮತದಾನ ಮತದಾನ ನಿಯತ್ತೆ ಇಲ್ಲದ ಸ್ವಾನ 

ದುಡ್ಡು ಹೆಂಡಾ ಬಟ್ಟೆಬರೆಗೆ ಮಾರುಹೋಗುವ ಮತದಾರ 
ಇದನು ತಡೆಯಲು ಧರೆಗೆ ಬರಬೇಕು ನಮ್ಮ ಬಾಳಿನ ಸೂತ್ರಧಾರ 
ಯಾವುದು ತಪ್ಪು ಯಾವುದು ಸರಿಯೋ ತಿಳಿಯಲಾಗದ ಮತದಾರ 
ಮತದಾನದ ಹಕ್ಕಿನಲಿ ಮಾಯವಾಗಿದೆ ನ್ಯಾಯ ಧರ್ಮದ ಸಂಸ್ಕಾರ 

ಕೈ ಕಾಲು ಬೀಳುವ ರಾಜಕಾರಣಿ ಸಮೀಪಿಸಿದಾಗ ಚುನಾವಣೆ 
ಇಲ್ಲವಾದರೆ ಯಾರು ಕೇಳರು ಪ್ರತಿದಿನದ ಕಷ್ಟದ ಬವಣೆ 
ಏನೇ ಆದರು ಹೀಗೆ ಇರುವೆವು ಎಂದು ಸಾಗುವ ರಾಜಕಾರಣಿಗಳು 
ಏನೇ ಆದರು ವ್ಯವಸ್ತೆ ಸರಿಹೋಗದು ಎಂದು ಸುಮ್ಮನಾಗುವ ನಮ್ಮ ಜನಗಳು 

                                                                      ಶಿವಪ್ರಸಾದ ಮಿಣಜಿಗಿ