Thank you message


Saturday, 8 March 2014

ನಿನ್ನ ಈ ಸ್ಪರ್ಶಕೆ...

ಬಾನಲ್ಲಿ ಓಡುತಿರೊ ಮೋಡ 
ಕರಗಿತು ನಿನ್ನ ಅಂದವ ನೋಡಿ 
ಸುರಿಯಿತು ನಿನ್ನ ಮೇಲೆ ಹನಿಯಾಗಿ ಮೂಡಿ 
ಧನ್ಯವಾಯಿತು ಆ ಮಳೆ ಹನಿ ನಿನ್ನ ಈ ಸ್ಪರ್ಶಕೆ 
ಅದನ್ನು ಕಂಡು ಅಂದೆ, ಮಳೆಹನಿಯಾಗಬಾರದೆ ನಾ ನಿನ್ನ ಈ ಸ್ಪರ್ಶಕೆ

ದೀಪ ಬೀರುವ ಹೊಂಬೆಳಕು, ಕಂಡು ಈ ನಿನ್ನ ಚಂದವ
ಸೂಸಿತು ಬೆಳಕಿನ ಕಿರಣವ, ಸ್ಪರ್ಶಿಸಿತು ಈ ನಿನ್ನ ಅಂದವ 
ಅದನ್ನು ಕಂಡು ಅಂದೆ, ಬೆಳಕಿನಕಿರಣವಾಗಬಾರದೆ  ನಾ ನಿನ್ನ ಈ ಸ್ಪರ್ಶಕೆ

ಹುಣ್ಣಿಮೆ ಚಂದಿರ ನಾಚಿ ನೀರಾದ, ಕರಗಿ ಮೋಡದಲಿ ಮರೆಯಾದ 
ಬೆಳದಿಂಗಳನ್ನು ನಿನ್ನ ಮೇಲೆ ಚೆಲ್ಲಿ ನಿನ್ನ ಅಂದವ ಸ್ಪರ್ಶಿಸಿದ 
ಅದನ್ನು ಕಂಡು ಅಂದೆ, ಹುಣ್ಣಿಮೆ ಬೆಳದಿಂಗಳಾಗಬಾರದೆ ನಾ ನಿನ್ನ ಈ ಸ್ಪರ್ಶಕೆ

                                                                         ಶಿವಪ್ರಸಾದ ಮಿಣಜಿಗಿ