Thank you message


Saturday, 15 March 2014

ನಮ್ಮಿಬ್ಬರ ಪ್ರೇಮಗೀತೆ

ಹಾಡುವೆನು ನಿನಗಾಗಿ, ಹೊಸದೊಂದು ರಾಗದಲಿ,
ನನ್ನೆದೆಯ ಭಾವದಲಿ, ನಮ್ಮಿಬ್ಬರ ಪ್ರೇಮಗೀತೆ 

ಕೋಗಿಲೆಯ ರಾಗದಲಿ, ಜುಳು ಜುಳು ಝರಿಯ ತಾಳದಲಿ,
ನನ್ನ ಬಯಕೆಗಳ ಭಾವದಲ್ಲಿ, ಹಾಡುವೆನು ನಾನಿಂದು ನಮ್ಮಿಬ್ಬರ ಪ್ರೇಮಗೀತೆ 

ನಿನ್ನ ಮನದಲಿ ನೆನೆಯುತಲಿ, ನಿನ್ನ ಪ್ರೀತಿಯ ಹರಸುತಲಿ,
ನಿನ್ನ ಧ್ಯಾನವ ಹಾಗೆ ಮಾಡುತಲಿ, ಹಾಡುವೆನು ನಾನಿಂದು ನಮ್ಮಿಬ್ಬರ ಪ್ರೇಮಗೀತೆ 

                                                             ಶಿವಪ್ರಸಾದ ಮಿಣಜಿಗಿ