Thank you message


Saturday, 1 March 2014

ನನ್ನ ಬಾಳಲಿ ನೀನಿರಬೇಕು...

ಸಾವಿರ ಹೂಗಳ ಹೃದಯಗಳು ಸ್ಪಂದಿಸಬೇಕು ಜೇನಿನ ಗೂಡಾಗಲು 
ಮಳೆಹನಿ ಭುವಿಯ ಮುತ್ತಲೆಬೇಕು ಹಸಿರಿನ ಈ ನಾಡಾಗಲು 
ಸಪ್ತಸ್ವರಗಳು ಸೇರಲೇಬೇಕು ಪ್ರೀತಿಯ ಓಂದು ಹಾಡಾಗಲು 

ಉದಯರವಿ ಕಿರಣವ ಸೋಸಲೇಬೇಕು ಕತ್ತಲೆಯ ನಾಡು ಬೆಳಕಾಗಲು 
ಮಳೆಹನಿ ಕಪ್ಪೆಚಿಪ್ಪನು ಸೇರಲೇಬೆಕು ಸ್ವಾತಿಯ ಮುತ್ತಾಗಲು 
ಪ್ರೇಯಸಿ ಪ್ರೇಮಿಯ ಅಪ್ಪಲೇಬೇಕು ವಿರಹದ ನೋವು ದೂರವಾಗಲು 

ಪ್ರಕೃತಿ ಸೌಂದರ್ಯವ ಸವಿಯಲೇಬೇಕು ನಿಸರ್ಗದ ಕವಿಯಾಗಲು 
ಶಿಲ್ಪಿಯ ಕಲ್ಪನೆಯ ಸಾರವೇಬೇಕು ಕಲೆಗಳ ಬಿಡಾಗಲು 
ನನ್ನ ಬಾಳಲಿ ನೀನಿರಬೇಕು ನನ್ನ ಜೀವನ ದನ್ಯವಾಗಲು 

                                                      ಶಿವಪ್ರಸಾದ ಮಿಣಜಿಗಿ