ವಸಂತ ಹಾಡುವನು ಕೋಗಿಲೆಯ ದನಿಯಲಿ ಹೊಸವರುಷದ ಹಾಡು
ಗಿಡ ಮರಗಳು ಹಸಿರಿನಿಂದ ಮೈತುಂಬಿ ಆಗುವದು ಚೆಲುವಿನ ಬೀಡು
ಸಿಹಿಕಹಿ ನೋವುನಲಿವುಗಳ ನೆನೆಯುವ ಸಮಯ
ಹೊಸಹರುಷದಿ ಹೊಸವರುಷಕೆ ಹೆಜ್ಜೆಹಾಕುವ ನಡೆಯ
ಬಾಳ ಪಯಣವು ಮುಂದೆ ಸಾಗಲಿ ಪ್ರತಿ ಆಟದ ಗೆಲುವಿನಂತೆ
ಸ್ನೇಹ ಪ್ರೀತಿಯು ತುಂಬಿ ಹರಿಯಲಿ ಹಾಲುಜೇನಿನ ಓಲವಿನಂತೆ
ಕೋಗಿಲೆಯ ರಾಗದಲಿ ಮೂಡಿಬರಲಿ ಹೊಸದಿಗಂತದ ರಾಗವ
ಹಚ್ಚಹಸಿರಿನ ಎಲೆಯು ಚಿಗುರಲಿ ಇಳಿಸಿ ನೋವಿನ ಭಾರವ
ನೋವುನಲಿವುಗಳ ಬಿಂಬವಿವುದು ಈ ಬೇವು ಬೆಲ್ಲದ ಮಿಶ್ರಣ
ಬೇವುಬೆಲ್ಲದಿ ನೋವು ನಲಿವಿದೆ ನಮ್ಮ ಬಾಳಿನ ಕಣಕಣ
ಆತ್ಮ ಸಾಕ್ಷಿಯ ಮುಟ್ಟಿ ಮಾಡೋಣ ಸತ್ಯವೆಂಬುವ ಭಾಷೆಯ
ಬೇವು ಕರಗಿ ಬೆಲ್ಲವಿರಲಿ ಎಂಬುದೊಂದೆ ಆಶಯ
ಶಿವಪ್ರಸಾದ ಮಿಣಜಿಗಿ