Thank you message


Saturday, 22 March 2014

ನನ್ನ ಪ್ರೀತಿಯ ಮೂಲ

ದೀಪಕೆ ಕೇಳಿದೆ ಎಲ್ಲಿ ನಿನ್ನ ಬೆಳಕಿನ ಮೂಲ 
ಗಾಳಿಗೆ ಕೇಳಿದೆ ಎಲ್ಲಿ ನಿನ್ನ ಸೌಗಂಧದ ಮೂಲ 
ನನ್ನಲಿ ಹುಟ್ಟಿದ ಈ ನಿನ್ನ ಪ್ರೀತಿಗೆ ಕೇಳಿದೆ ಎಲ್ಲಿ ನಿನ್ನ ಮೂಲ

ಭೂಮಿಗೆ ತಿಳಿಯದು ಮಳೆಯ ಮೂಲ 
ದುಂಬಿಗೆ ತಿಳಿಯದು ಜೇನಿನ ಮೂಲ 
ಆದರೆ ಪ್ರೀಯೆ ನನಗೆ ತಿಳಿದಿದೆ ನನ್ನ ಪ್ರೀತಿಯ ಮೂಲ 
ಅದು ಹುಟ್ಟಿದ್ದು ನಿನ್ನಿಂದ ನೋಡಾ... 

ಕಾಮನಬಿಲ್ಲಿಗೆ ತಿಳಿಯದು ಬಣ್ಣದ ಮೂಲ 
ಮಗುವಿಗೆ ತಿಳಿಯದು ನಗುವಿನ ಮೂಲ 
ಆದರೆ ಪ್ರೀಯೆ ನನಗೆ ತಿಳಿದಿದೆ ನನ್ನ ಪ್ರೀತಿಯ ಮೂಲ 
ಅದು ಹುಟ್ಟಿದ್ದು ನಿನ್ನಿಂದ ನೋಡಾ... 

                                         ಶಿವಪ್ರಸಾದ ಮಿಣಜಿಗಿ