Thank you message


Saturday, 22 February 2014

ಕಣ್ಣಿನ ನೋಟದಿ ಸೆಳೆಯುವ ಕುವರಿ

ಕಣ್ಣಿನ ನೋಟದಿ ಸೆಳೆಯುವ ಕುವರಿ 
ಹೃದಯವು ಮಿಡಿಯುವ ಮೋಹಕ ಸುಂದರಿ 
ಬೇಲೂರಿನ ಶಿಲ್ಪಕಲೆಗೆ ಇವಳೇನೆ ಮಾದರಿ 
ಇವಳ ನೋಟಕೆ ಪ್ರೀತಿ ಹುಟ್ಟಿದೆ ಅದರಲ್ಲೇನಿದೆ ಅಚ್ಚರಿ 

ಕವನವು ಕರೆದಿದೆ ಹೇಳಲು ಇವಳ ಅಂದದ ವೈಖರಿ 
ಹುಚ್ಚು ಹೃದಯ ಮೆಚ್ಚಿಕೊಂಡಿದೆ ಇವಳನಿಷ್ಟು ಯಾಕೆರಿ 
ಇವಳೆ ನನ್ನ ಜೀವದ ಗೆಳತಿ ಎಂಬುದೊಂದೇ ಕಾತುರ 
ನೊರುಜನ್ಮ ಹುಟ್ಟಿಬಂದರೂ ಇವಳೆ ನನ್ನ ಸಾಥಿರಿ 

ಇರುಳ ಕನಸಲಿ ಕಾಡುವ ಚೋಕರಿ 
ಇವಳನು ಜಪಿಸುವುದೆ ನನ್ನಯ ನೌಕರಿ 
ಇವಳನು ನೋಡಿ ಹೇಳಲೆ ಶಾಯರಿ 
ಪದವೆ ಬರದೆ ನಿಂತೆನು ಬಾಯಾರಿ 

                                         ಶಿವಪ್ರಸಾದ ಮಿಣಜಿಗಿ