Thank you message


Saturday, 15 February 2014

ಮಿಲನ ಸಿಹಿಯಾದ ಕವನ

ಓಲವಿನ  ಕಾರಂಜಿ ಚಿಮ್ಮುತಿದೆ ಇಂದು ಈ ಪ್ರೇಮ ಹೂದೊಟದಿ 
ಪ್ರೀತಿಯ ಹೂ ಒಂದು ಅರಳುತಿದೆ ಅಲ್ಲಿ ಈ ನಿನ್ನ ಮುಡಿಗಾಗಿಯೆ 
ಬಾಯಾರಿ ನಿಂತಂತ ಮರುಭೂಮಿಗೆ ಒಂದು ಮಳೆಹನಿಯು ನಿನಲ್ಲವೆ 
ಈ  ಬಾಳ ಪಯಣದಲಿ ಪ್ರತಿಯೊಂದು ನಿಮಿಷದಲಿ ನೀನನ್ನ ಉಸಿರಲ್ಲವೆ 

ಕೈ ಚಾಚಿ ಓಲವಿಂದ ನಾ ನಿನ್ನ ಕರೆವಾಗ ಆ ಮೌನ ಮಾತಾಡಿದೆ 
ಕಣ್ಣ ಸನ್ನೆಯಲಿ ನಿನ್ನ  ನಾ ನೋಡುತಿರೆ ಈ ಜೀವ ಕಸಿಯಾಗಿದೆ 
ಈ ನಿನ್ನ ನೆಡೆಗೆ ಈ ನಿನ್ನ ನುಡಿಗೆ ನವಿಲೊಂದು ತಾ ನಾಚಿದೆ 

ನೀನೊಮ್ಮೆ ನನ್ನನ್ನು ಕರೆಯುತಿರೆ ಈ ಹೃದಯ ಅಲೆಯಂತೆ ತೆಲಾಡಿದೆ 
ದುಂಬಿಯ ಮೃದು ಸ್ಪರ್ಶಕೆ ಹೂ ಓಂದು ಖುಷಿಯಿಂದ ನಲಿದಾಡಿದೆ 
ನಮ್ಮಿಬ್ಬರ ಮಿಲನ ಸಿಹಿಯಾದ ಕವನ ವಿರಹವನು ದೂರ ಮಾಡಿದೆ 

                                                         ಶಿವಪ್ರಸಾದ ಮಿಣಜಿಗಿ